ವಿಷಯಕ್ಕೆ ಹೋಗಿ

ಮಹಾಭಾರತ ಕಾಲದಲ್ಲಿ ಶ್ರೀ ಕೃಷ್ಣ ಏಕೆ ಯುದ್ಧ ಮಾಡಲಿಲ್ಲ?

ಮಹಾಭಾರತ ಕಾಲದಲ್ಲಿ ಶ್ರೀ ಕೃಷ್ಣ ಏಕೆ ಯುದ್ಧ ಮಾಡಲಿಲ್ಲ?

       ಶ್ರೀ ಕೃಷ್ಣ ಪರಮಾತ್ಮನು ಆಯುಧವನ್ನು ಹಿಡಿದು ಮಹಾಭಾರತ ಯುದ್ಧ ಭೂಮಿ ಕುರುಕ್ಷೇತ್ರದಲ್ಲಿ ನಿಂತಿದ್ದರೆ 18 ಕ್ಷನಗಳಲ್ಲೇ ಯುದ್ಧ ಸಮಾಪ್ತವಾಗುತಿತ್ತು. 18 ದಿನಗಳು ಯುದ್ಧಕ್ಕಾಗಿ ಬೇಕಾಗಿರಲಿಲ್ಲ.

   ಈ ರೀತಿ ಮಾಡುವುದರಿಂದ ಅರ್ಜುನ ಭೀಮ ನಕುಲ ಸಹದೇವರ ಶಪತವು ಭಂಗವಾಗುತ್ತಿತ್ತು. ಹಾಗೆಯೇ ದ್ರೌಪದಿಗೆ ಭೀಮ ಕೊಟ್ಟ ವಚನ ನೆರವೇರುತ್ತಿರಲಿಲ್ಲ. ಅಷ್ಟೇ ಅಲ್ಲದೆ ದ್ರೌಪದಿ ಅವಳ ಕೇಶವನ್ನು ದುಶ್ಯಾಸನನ ರಕ್ತದಿಂದ ಹಾಕಿಸಿಕೊಂಡು ಅವಳ ಶಪಥವು ನೆರವೇರುತಾ ಇರಲಿಲ್ಲ.

    ಈ ಮಹನೀಯರ ಶಪಥವನ್ನು ನೆರವೇರಿಸಲು ಮತ್ತು ದ್ರೋಣ ಕರ್ಣ ಭೀಷ್ಮಾಚಾರ್ಯರಿಗೆ ಸರಿಸಾಟಿಯಾಗಿ ನಿಂತು ಯುದ್ಧ ಮಾಡಿ ಅವರಿಗೆ ವೀರ ಗತಿಯು ಪ್ರಾಪ್ತಿಯಾಗಲು ಪಾಂಡವರು ಕಾರಣವಾಗಲು ಸಾಧ್ಯವಾಗುತ್ತಿರಲಿಲ್ಲ.

      ಕೃಷ್ಣ ಪರಮಾತ್ಮನ ಅವತಾರ ಕಾರಣಗಳು ಹಿಂದೆಯೇ ಮುಗಿದಿತ್ತು. ಆದರೆ ಒಂದು ಮುಕ್ಯ ಕಾರಣಕ್ಕಾಗಿಯೇ ಆತ ಇಡೀ ಮಹಾ ಭಾರತ ಯುದ್ಧವನ್ನು ಮುಂದೆ ನಿಂತು ನಡೆಸಿ ಪಾಂಡವರಿಗೆ ವಿಜಯ ಕೀರ್ತಿಯನ್ನು ನೀಡಲು ಆತ ಶಸ್ತ್ರವನ್ನು ತೊಡಲಿಲ್ಲ.

       ಇದರ ಮೂಲಕ ಮನುಕುಲಕ್ಕೆ ವೇದವ್ಯಾಸರ ಮಹಾಭಾರತ ಗ್ರಂಥದಿಂದ ಪರಮಾತ್ಮನ ಸಂದೇಶವೆಂದರೆ ನಮ್ಮ ಸಮಸ್ಯೆಗಳನ್ನು ನಾವೇ ಧೈರ್ಯವಾಗಿ ಮುಂದೆ ನಿಂತು ಎದುರಿಸಿ ಗೆಲ್ಲುವ ಕ್ಷಮತೆಯನ್ನು ಬೆಳೆಸಿಕೊಂಡು ಮುನ್ನುಗ್ಗಿದರೆ  ಪರಮಾತ್ಮನೇ ನಮ್ಮ ಸಾರಥ್ಯವನ್ನು ಧರಿಸಿ ನಮಗೆ ವಿಜಯವನ್ನು ಕೊಡುತ್ತಾನೆ. ನಮ್ಮ ಇಚ್ಛೆ ಮತ್ತು ಮಾರ್ಗವೂ ಧರ್ಮವಾಗಿ ಇರಬೇಕು..


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ganapati drawing image

shree krishna drawing image